ಭೂಮಿಗೀತ
ಬರಿಗೊರಳು ಉಲಿದ ಎದೆಹಾಡು....
Showing posts with label
ಹಾಯ್ಕು ಹಗರಣ
.
Show all posts
Showing posts with label
ಹಾಯ್ಕು ಹಗರಣ
.
Show all posts
Monday, May 26, 2014
ಹಾಯ್ಕು ಹಗರಣ ~ 8
ತಣ್ಣನೆಯ ಬೆಂಕಿ ಸುಡುವುದಿಲ್ಲ
ಇಂಚಿಂಚೆ ಕೊಲ್ಲುತ್ತದೆ..
ಇರಿದ ರಕ್ತ ಸೋರದ ಹಾಗೆ!
***
ಗಾಣದಲ್ಲಿ ಒಣ ಹಾಕಿದ್ದ ಎಳ್ಳು
ಸಿಡಿದು
ಮೊಳೆತು ಹೂ ಬಿಟ್ಟಿತು.
Monday, May 19, 2014
ಸಣ್ಣ ಸೂಜಿಯ ಶಬ್ದ
ಇರಿಯುತ್ತಿದೆ
ಬಯಲು ತಣ್ಣನೆ ಮಲಗಿದೆ.
***
ಚಂದ್ರನಲ್ಲಿ ಕಲೆ
ಹುಡುಕುವವರ ಕಣ್ಣಿಗೆ
ಬೆಳದಿಂಗಳು
ಎಂದೂ ಕಂಡಿರುವುದೇ ಇಲ್ಲ!
ಖಾಲಿ ಸೀಸದ ಒಳಗೆ
ಮಿಂಚುಳ ಬಂಧಿಯಾಗಿದೆ.
ಇದು ಗ್ರಹಣ ಕಾಲ!
***
ಒಲುಮೆ
ಮೊಗೆದು ಕುಡಿದಷ್ಟೂ
ತುಂಬದ ಒಡಲ
ಖಾಲಿ ಸೀಸೆಯ ಗದ್ದಲ.
***
ಈ ರಾತ್ರಿಯೊಂಬೊ ಬೆತ್ತಲು
ಮೈಯೊಳಗೆ
ಎಣಿಸದಷ್ಟು ಪರಚು ಗಾಯಗಳಿವೆ!
***
ಹಕ್ಕಿ ಹಾಡುವುದ ಕೇಳಿಸಿಕೊಂಡ
ಕವಿ, ನಕಲು ಮಾಡಿ
ಕವಿತೆ ಬರೆದುಕೊಂಡ!
Sunday, May 11, 2014
ಹಾಯ್ಕು ಹಗರಣ
ಉಸಿರೆಂಬುದು
ಬೆಳಕಿರದ
ಬೆಂಕಿ! ~
***
ಉಸಿರು ~
ತಡೆಯಲಾರದ ತಾಪ
ಬೆಳಕಿರದ ಬೆಂಕಿಯ
ಡ್ರಾಗನ್
***
ಉಸಿರಿನ
ಆಳದಲ್ಲಿ
ಡ್ರಾಗನ್ ಹಾರುತ್ತಿದೆ!
ಹಾಯ್ಕು ಹಗರಣ
ತೆಂಗಿನ ಮರದ
ತುದಿಯಲೊಂದು
ಹುಣ್ಣಿಮೆಯ ಹಣ್ಣು.
***
ಬೆಳಕಿಗಿಂತಲೂ
ಕತ್ತಲೇ ಉರಿಯುತ್ತದೆ
ತಣ್ಣಗೆ!
***
ಕತ್ತಲೆಂಬುದು
ಸೃಷ್ಟಿ ಎಳೆದುಕೊಂಡ
ಒಂದು ತೆರೆ. ~
ಹಾಯ್ಕು ಹಗರಣ ; 3
ನದಿಗೆ
ಸೋರುವ ನೆಗಡಿ ;
ಅಧಿಕಮಾಸದ ಮಳೆಗಾಲ
ಹಾಯ್ಕು ಹಗರಣ ; 2
ಕ್ಷಿತಿಜೆಯ ಅಂಗಳವೆಲ್ಲಾ
ರಕ್ತ ತೊಳೆದ ನೀರು
ಸೂರ್ಯನ ಕಗ್ಗೊಲೆ!
ಹಾಯ್ಕು ಹಗರಣ : 1
ಹುಣ್ಣಿಮೆಯ ರಾತ್ರಿ
ಇದೇನು ಕೊಲೆ, ಹಗರಣ.
ಕೊಳದಲ್ಲಿ ತೇಲುತಿಹದು
ಚಂದಿರನ ಹೆಣ!
Older Posts
Home
Subscribe to:
Posts (Atom)