Showing posts with label ಬಾಶೋ. Show all posts
Showing posts with label ಬಾಶೋ. Show all posts

Monday, May 26, 2014

ಬಾಶೋ | 307

ದೇಗುಲದ ಘಂಟೆಯೂ
ಕೀರುತ್ತದೆ.
ಸೀರುಂಡೆಯ ದನಿಯಂತೆ!

撞鐘も
ひびくやうなり
蝉の声

~ ಬಾಶೋ | 307

ಬಾಶೋ | 6

ನೀರಿನೊಳಗೆ
ತಮ್ಮ ಚಿತ್ರವ ನೋಡಿಕೊಳ್ಳುತ್ತಿವೆ
ನೀಲಿ ಬಾವುಟದ ಕಣ್ಣಿನ ಪಾಪೆಗಳು!

かきつばた
にたりやにたり
みずのかげ

~ ಬಾಶೋ | 6

Monday, May 19, 2014

ಬಾಶೋ |364



ಹಸಿರೆಲೆ, ಚಿಗುರ ಕೆಂದೆಲೆಗಳ ನಡುವೆ
ಸೂರ್ಯ ಹರಿಯುತ್ತಿದ್ದಾನೆ..
ಆಹಾ! ಎಷ್ಟು ಪವಿತ್ರ!

あらたふと
青葉若葉の
日の光

~
ಬಾಶೋ |364

ಬಾಶೋ |100



ಕಿಟಕಿಯಿಂದ ಬಿದ್ದ
ಚಂದಿರನ ಬೆಳಕಿನ ಚಚ್ಚೌಕ,
ನನ್ನ ಮನೆ.

我が 宿 和
資格 な 影 お
窓 の 月

~
ಬಾಶೋ |100

ಬಾಶೋ | 297



ಭತ್ತದ ಗದ್ದೆಯ ನಡುವಿನಲ್ಲಿ
ಮಿಂಚುಳುಗಳು
ಎಷ್ಟೊಂದು ಚಂದಿರರು!

この 蛍
田毎 の 月 に
比べ民

~
ಬಾಶೋ | 297

ಬಾಶೋ |570



ಭತ್ತದ ಗದ್ದೆಯ ಗುಬ್ಬಿಗಳೆಲ್ಲ
ಆಶ್ರಯ ಅರಸುತ್ತಿವೆ
ಟೀ ತೋಟದಲ್ಲಿ.

伊那 雀
茶の木畑 や
逃げどころ

~
ಬಾಶೋ |570

ಬಾಶೋ |212



ತೆನೆಕಚ್ಚಿರುವ
ಭತ್ತದ ಗದ್ದೆಯಲ್ಲಿ, ಕೊಕ್ಕರೆ ಶಕುನ
ಶರತ್ಕಾಲ ಹಳ್ಳಿಗಾವರಿಸಿದೆ.

刈りかけし
田面の鶴や
里の秋

~
ಬಾಶೋ |212