ಪ್ರೇಮ ಪ್ರಸಂಗಗಳು-1
ಹೂ ಮಾರುವ ಹುಡುಗ ಸಿರಿವಂತರ ಕೇರಿಯ ಹುಡುಗಿಯೊಬ್ಬಳಿಗೆ ನಿತ್ಯ ಮಲ್ಲಿಗೆ ದಂಡೆ ನೀಡುತ್ತಿದ್ದ,
ಹಣ ಪಡೆದು...?!
ಮಲ್ಲಿಗೆ ಮುಡಿದ ಆಕೆಯ ಕಣ್ಣ ತುಂಬ ಮಿಂಚಿನ ಬೆಳಕು ,
ರಿಕ್ತಕರನಾದ ಇವನ ಮನಸ್ಸಿನೊಳಗೆ ಹೂ ಮಳೆ...!
ದಿನದಿನಗಳು ಉರುಳುತ್ತಲೇ ಪ್ರೀತಿ ಧಮನಿಧಮನಿಗಳಲು ವ್ಯಾಪಿಸಿ,
ಬೆಳೆದು ಬೆಳದಿಂಗಳು ಸುರಿಯತೊಡಗಿತ್ತು.
ಆ ದಿನ ಮಲ್ಲಿಗೆ ಬದಲು ಗುಲಾಬಿ ನೀಡಲು ಮುಂದಾದ ಹುಡುಗನ ಕೈಗಳು ನಡುತ್ತಿದುದ ಗಮನಿಸಿದ ಹುಡುಗಿ ತಾನೆ ಕಸಿದು ಹೂ ಮುಡಿದಳು.
ನಸುನಾಚಿದ ನಗುವೊಂದ ಆತನ ಕೈಗಿತ್ತಳು.
ಮಲ್ಲಿಗೆ ಅಂಗಳದಿ ಚೆಲ್ಲಿತ್ತು!
ಹುಡುಗನ ಸೈಕಲ್ಲಿನ ಹೂ ಬುಟ್ಟಿ ತುಂಬ ಗುಲಾಬಿಗಳು.
No comments:
Post a Comment