Tuesday, December 29, 2009

ಇಷ್ಟೇ!


ನನ್ನೆದೆಯಲ್ಲಿ ಬುದ್ದ ನಗೆಯ
ಅಲೆಯೊಂದು ಇದೆ.
ಅವಳ ಅನಿವಾರ್ಯತೆ ಬಿಟ್ಟು
ಆಸೆಗಳಿಲ್ಲ!

ದೇಹದ ತುಂಬಾ
ಬೆಳೆದು ನಿಂತ ರೋಮಗಳಿಗೆ
ಅವಳ ಬೆವರ ಹನಿಗಳು ಬೇಕು
ಅಷ್ಟೆ!

ನಾನು ನಿರುಮ್ಮಳವಾಗಿ ಬದುಕುತ್ತೇನೆ
ಕಾರಣ,
ನನ್ನೆದೆಯಲ್ಲಿ ಬುದ್ದ ನಗೆಯ
ಅಲೆಯೊಂದು ಇದೆ.

2 comments:

  1. ಅನಿವಾರ್ಯತೆಯತೆಯ ಹೊರತಾಗಿ ಆಸೆಗಳಿಲ್ಲದ ಬುದ್ದ ನಗೆಯ ಅಲೆಯೊಂದರ ವಸ್ತು, ಮತ್ತು ಅದರ ಒಂದು ಸಮಂಜಸ ಅಭಿವ್ಯಕ್ತಿಗೆ ಒದಗಿಬಂದಿರುವ ನಿರುಮ್ಮಳ ಶೈಲಿ, -ಇವೆರಡೂ ತಮ್ಮ ಸಹಜ ಸೌಂದರ್ಯದಿಂದ ಇಷ್ಟವಾದವು. :)

    ReplyDelete