Thursday, May 2, 2013

ಪಿರಿಯಡ್ ಮಿಕ್ಸ್ - 1

ಪಿರಿಯಡ್ ಮಿಕ್ಸ್...

'ಋತು ಗಾನ''ದಿಂದ ಒಂದು ಆಲಾಪ
*********************

ಅವಳು ಒಳಬರದ
ಮೂರೂ ದಿನವೂ
ನಾನೂ ಹೊರಗಾಗುತ್ತೇನೆ!

ಬಾಲ್ಕನಿಯಲಿ ಬೆಚ್ಚಗೆ ಕುಳಿತು
ಬೆಂಕಿ ಇಲ್ಲದ ಅಡುಗೆ ಅಟ್ಟು,
ಕೊಂಚ ದ್ರಾಕ್ಷಾರಸ ಗುಟುಕಿಸಿ
ಮುತ್ತಿನ ಮಲ್ಲಿಗೆ ಕಟ್ಟುತ್ತಾ,
ಕಣ್ಣಲಿ ತುಂಬಿದ ಪ್ರೀತಿಯ
ಎದೆಗಿಳಿಸಿಕೊಳ್ಳುತ್ತೇವೆ,
ಅವನರತ.

ಒಮ್ಮೊಮ್ಮೆ
ನೋವಿಗೆ ಬಿಗಿದಪ್ಪುತ್ತಾಳೆ ..
ನನ್ನ ಕಣ್ಣಲಿ ಅವಳು ಅಳುತ್ತಾಳೆ
ನನ್ನ ಚಡಪಡಿಕೆ ಕಂಡು
ಮೂದಲಿಸುತ್ತಾಳೆ.

ಅವಳ ನಾಭಿಯ ಹೊಕ್ಕ ಬೆರಳಿನಿಂದ
ನೋವು ನನಗೂ ವರ್ಗವಾಗಲೆಂದು,
ನನ್ನ ಕೈ ಅಲ್ಲೇ ನಡುವಿನಲ್ಲೇ ಬಿಡಾರ ಹೂಡಿದೆ.
ಮತ್ತೊಂದು ತಲೆಗೆ ತಳವಾಗಿದೆ.

ಈ ತೆರೆದ ಕಿರು ಹಜಾರದಲ್ಲಿ
ಹಿನ್ನಲೆಗೆ ಒಂದು ಸಣ್ಣ ರಾಗಾಲಾಪ,
ಮಿಟುಕಿ ಮಿನುಗುವ ಸಣ್ಣ ಸೊಡರು
ಅವಳ ನಿದ್ದೆಗೆ ನನ್ನ ಲಾಲಿ..
ಮಲಗಲಿ ನನ್ನೊಲವು ಸುವ್ವಾಲಿ.

2 comments:

  1. ಎಲ್ಲೆಲ್ಲಿಂದಲೋ ಇಲ್ಲಿ ಬಂದು ಓದಿದರೆ 'ಎಲ್ಲಿದ್ದೆ ಇಲ್ಲಿ ತಂಕ...' ಅನ್ನೋ ಸಾಲು ನೆನಪಾಗುತ್ತಿದೆ.
    ನಿಮ್ಮ ಸಾಲುಗಳನ್ನು ಓದಿ , ಮೂರು ದಿನದಲ್ಲಿ ಗಂಡು ತೋರಿಸಬಹುದಾದ ಅಕ್ಕರೆಗೆ ಮರುಳಾಗಿ ಮೊಟ್ಟ ಮೊದಲ ಬಾರಿ ಮೂರು ದಿನವೂ ಹಿತ ಎನಿಸುತ್ತಿದೆ .
    " ಅವಳ ನಿದ್ದೆಗೆ ನನ್ನ ಲಾಲಿ..ಮಲಗಲಿ ನನ್ನೊಲವು ಸುವ್ವಾಲಿ " ಸುಂದರ ಸಾಲು
    ಪಿರಿಯಡ್ ಮಿಕ್ಸ್ ಅನ್ನು ಪರಿಚಯಿಸಿದ್ದಕ್ಕೆ ವಂದನೆಗಳು

    ReplyDelete
  2. ಕಾವ್ಯಶಕ್ತಿ ನಿಮ್ಮಲ್ಲಿದೆ. ಪದಭಾಂಡಾರ ನಿಮ್ಮಲ್ಲಿದೆ. ನಿಮ್ಮಿಂದ ಒಳ್ಳೆಯ ಕವನಗಳು ಬರುವುದರಲ್ಲಿ ಸಂದೇಹವಿಲ್ಲ.

    ReplyDelete