Friday, August 23, 2013

ಕಟ್ಟುಕಥೆಗಳು +2

ಹಳ್ಳಿಯಲಿ ಭಿಕ್ಷಕೆ ಬಂದಿದ್ದ ಶಿಷ್ಯ ಕೇಳಿದ 'ಗುರುಗಳೇ ಕಾವ್ಯ ಆದ್ರೇನು' ?
ಪ್ರಜ್ಞಾಪರಮಿತರು ಕೈ ಬೊಟ್ಟು ಮಾಡಿ ತೋರಿಸುತ್ತಾ ಹೇಳಿದರು,
ಮರಕುಟಿಗ ಹಕ್ಕಿ ಮರ ಕುಟುಕುವ ಸದ್ದು ಕೇಳಿಸಿತೇ?
ಎತ್ತುಗಳ ಕಾಲಿನ ಗೊರಸಿನ ಸದ್ದು ?
ಹೋಗಲಿ ಹೆಣ್ಮಕ್ಕಳ ಬಳೆಗಳ ಸದ್ದು..
ಶಿಷ್ಯ 'ಇಲ್ಲ' ತಲೆಯಲ್ಲಾಡಿಸಿದ.
ಮೊದಲು ಕಿವಿಯಾಗು ದನಿಗೆ.. ಕಾವ್ಯ ಆಮೇಲೆ.
ಗೊಣಗಿದರು ಗುರುಗಳು.

>>RP ಕಟ್ಟುಕಥೆಗಳು +2

2 comments:

  1. ನನಗೀಗ ಮಳೆ ಹನಿಯ ಸದ್ದೇ ಕೇಳುವುದಿಲ್ಲ
    ಅದಕ್ಕೆ ನಾನು ಕವಿತೆ ಬರೆದಿಲ್ಲ !

    ReplyDelete
    Replies
    1. hha hha ಬೀಸುವ ಗಾಳಿಯ ಸದ್ದಾಲಿಸಿ ;)

      Delete