Showing posts with label ಕೊರಿಯನ್ ಕಾವ್ಯ ಸಂಪುಟ. Show all posts
Showing posts with label ಕೊರಿಯನ್ ಕಾವ್ಯ ಸಂಪುಟ. Show all posts

Sunday, May 11, 2014

ಜೆಒಂಗ್ ಮೋಂಗ್‌ಜು


ಒಂದು ಪಕ್ಷ ನಾ ಸತ್ತರೂ ಅಥವಾ ನೂರಾರು ಬಾರಿ ಕೊಂದರೂ,
ದೇಹದ ಮೂಳೆ, ಆತ್ಮ ಮಣ್ಣಾದರೂ.. ಬಿಟ್ಟರೂ..
ನನ್ನೆದೆಯಲ್ಲಿ ನಿಷ್ಠೆ ನಿಕೃಷ್ಟವಾಗುವುದನ್ನು ನೀ ಕಾಣಲಾರೆ. ~ ಜೆಒಂಗ್ ಮೋಂಗ್ಜು

이몸이 죽어죽어 일백 고쳐 죽어
백골이 진토되어 넋이라도 있고 없고
향한 일편단심이야 가실 줄이 이시랴. ~ 정몽주

ಯೊಂಗ್ ಚೆಒಲ್


ಕೊರೆವ ಚಳಿ, ಹಸಿವೆ ಮತ್ತು ಬೆತ್ತಲಿನಲ್ಲಿ
ಇಬ್ಬರು ಕಲ್ಲಿನ ಬುದ್ದರು ರಸ್ತೆಯಲ್ಲಿ ಮುಖಾಮುಖಿ ನಿಂತಿದ್ದಾರೆ
ಇದನೇನೊಂದೂ ಅರಿಯದ ಅವರ ಕಂಡು ನನಗೋ ಅಸೂಯೆಯಾಗುತ್ತಿದೆ! ~ ಯೊಂಗ್ ಚೆಒಲ್

위의 부처 벗고 굶고 마주 서서

바람비 눈서리를 멋대로 맞을망정

인간의 이별을 모르니 그를 부러하노라. ~ 정철

ಹುಆಂಗ್‌ ಇನಿ

ಈ ದೀರ್ಘ ಮಾಗಿಯ ನಡುರಾತ್ರಿಯನ್ನು ಮುರಿದು
ನನ್ನ ವಸಂತದ ಗಾದಿಯ ಕೆಳಗೆ ತಣ್ಣಗೆ, ಎರಡಾಗಿ ಮಡಚಿಡುತ್ತೇನೆ
ಅದನ್ನು ಬಿಚ್ಚಿ ಹಾಸಿದರೆ , ಅವನು ಬರಲೇಬೇಕು ಬಳಿಗೆ. ~ ಹುಆಂಗ್‌ ಇನಿ

동지달 기나긴 밤을 한 허리를 버혀 내여
춘풍 이불 아래 서리서리 넣었다가
어론 님 오신 날 밤이여든 굽이굽이 펴리라 ~ 황진이

'ಹುಆಂಗ್‌ ಇನಿ' (16ನೇ ಶತಮಾನ) ಮಧ್ಯಕಾಲೀನ ಕೊರಿಯಾ ಕಾವ್ಯದ ಖ್ಯಾತ ಕವಯತ್ರಿ. ಜೋಸೆನ್ ಸಾಮ್ರಾಟರ ಆಸ್ಥಾನದಲ್ಲಿ ಪ್ರಸಿದ್ದ ನರ್ತಕಿಯಾಗಿದ್ದಳು. ಸೌಂದರ್ಯ, ಚತುರತೆ, ಅಸಾಮಾನ್ಯ ತಿಳುವಳಿಕೆ ಎಲ್ಲವುಗಳಿಂದ ಇವತ್ತಿನ ಆಧುನಿಕ ಕೊರಿಯಾದಲ್ಲೂ ಆಕೆ ಮಾದರಿ ಎನಿಸಿಕೊಂಡಿದ್ದಾಳೆ.

ಭಾಷೆ: ಕೊರಿಯಾ
ಲಿಪಿ: ಹಂಗುಲ್

ಯುನ್ ಸಿಯೊನ್ ದೊ

ಮಧ್ಯಕಾಲೀನ ದಕ್ಷಿಣ ಕೊರಿಯಾದ ಮಹತ್ವದ ರಾಜಕಾರಣಿ & ಕವಿ 'ಯುನ್ ಸಿಯೊನ್ ದೊ'. ಈತನ ಸರಳವೂ ಸುಲಭವೂ ಆದ ಕಾವ್ಯಮಾರ್ಗ.. ಯಾಕೋ ನನ್ನನು ಹಿಡಿದಿಟ್ಟುಕೊಳ್ಳುತ್ತಿದ್ದೆ.. 
ಆತನದೊಂದು ಪುಟ್ಟ ಕವಿತೆ -

ನಿನಗೆಷ್ಟು ಗೆಳೆಯರೆಂದು ಕೇಳುವೆಯಾ? ಆ ನೀರು, ನುಣುಪುಕಲ್ಲು, ಬಿದಿರು ಮತ್ತೀ ಸೂಚೀಪರ್ಣಿ ಮರ.
ಪೂರ್ವಘಟ್ಟದೀ ಮೇಲೇರುತ್ತಿರುವ ನಲಿವಿನ ಒಡನಾಡಿ ಚಂದಿರ.
ಈ ಐವರು ಜೊತೆಗಾರರೊಂದಿಗೆ ಮತ್ತೆಷ್ಟು ಸುಖ ಕೇಳಲು ಸಾಧ್ಯವೇಳು?! ~ ಯುನ್ ಸಿಯೊನ್ ದೊ

내 벗이 몇인가하니 수석과 송죽이라
동산에 달오르니 그 더욱 반갑도다
두어라, 이 다섯 밖에 또 더해야 무엇하리 ~ 윤선도