ಸದ್ಯಕ್ಕೆ ನಾನು ಹೇಳ ಹೊರಟಿದ್ದು ವಜ್ರಯಾನ ಪಂಥದ ಐದು ಜನ ಜ್ಞಾನಬುದ್ಧರಲ್ಲಿ ಒಬ್ಬನಾದ ಅಕ್ಷೋಭ್ಯ ಬುದ್ದನ ಕಥೆ. ಉಳಿದವರು ಅಮೋಘಸಿದ್ದಿ , ವೈರೋಚನ ,ರತ್ನಸಂಭವ,ಅಮಿತಾಭ.
ವಜ್ರಾಯನ ತಾಂತ್ರಿಕ ಪಂಥವಾದರಿಂದ ಇಲ್ಲಿ ಮಂಡಲಗಳಿಗೆ ಪ್ರಾಮುಖ್ಯತೆ ಹೆಚ್ಚು. ಅಕ್ಶೋಭ್ಯನು ವಜ್ರಶೇಖರ ಸೂತ್ರಧಾರಿತ 'ವಜ್ರಧಾತು'( Diamond Realm)* ಮಂಡಲದ ಪಶ್ಚಿಮದಲ್ಲೂ & ಸುಖವತಿಯ (Pure Land )* ಪಶ್ಚಿಮದ ಒಡೆಯನಾಗಿ ನೆಲೆಸಿದ್ದಾನೆ.
ಅಕ್ಷೋಭ್ಯ ಬುದ್ದ |
ಅಮಿತಾಭ ಬುದ್ಧ |
ಅಮೋಘಸಿದ್ದಿ ಬುದ್ದ |
ರತ್ನಸಂಭವ ಬುದ್ದ |
ಅವಲೋಕಿತೇಶ್ವರ ಮಂಡಲ |
ವೈರೋಚನ ಬುದ್ದ |
ಅಕ್ಷೋಭ್ಯನ ಕಾಲ ಸುಮಾರು ಕ್ರಿ.ಪೂ.೧೪೭. ಬೌದ್ದ ಭಿಕ್ಕುವೊಬ್ಬ ತಾನು ಇನ್ನೆಂದು ಕೋಪ -ದ್ವೇಷಗಳನ್ನೂ ತಾಳುವುದಿಲ್ಲವೆಂದು & ಅಲ್ಲಿಯವರೆಗೂ ಇರುವಲ್ಲಿಯೇ ಸ್ಥಿರನಾಗುವೆನೆಂದು ನಿರ್ಧರಿಸುತ್ತಾನೆ. ತುಂಬಾ ಕಾಲದ ತನ್ನ ನಿರ್ಧಾರ ಪಾಲನೆಯಿಂದ ಜ್ಞಾನೋದಯವಾಗಿ ಬುದ್ದನಾಗುತ್ತಾನೆ. ಅವನೇ ಅಕ್ಷೋಭ್ಯ .
ಇನ್ನುಳಿದಂತೆ ಅವನ ತಾಂತ್ರಿಕ ವಿವರಣೆಗಳು ಬೇಕಾದಷ್ಟು ಸಿಗುತ್ತವೆ. ಅಕ್ಶೋಭ್ಯನು ಎರಡು ಅನೆಗಳೊಂದಿಗೆ ಕಮಲದಲಿ, ನೆಲೆಸಿದ್ದಾನೆ. ಬಲಗೈ ಆದಿಬುದ್ದನ "ಭೂಸ್ಪರ್ಶ ಮುದ್ರೆ "*ಯಲ್ಲಿ & ಎಡಗೈನಲ್ಲಿ 'ಶೂನ್ಯ' ಸಂಕೇತ 'ವಜ್ರ'ವನು ಹಿಡಿದ್ದಾನೆ. ಬಣ್ಣಗಳಲ್ಲಿ ನೀಲಿ .. ಧಾತುಗಳಲ್ಲಿ ಜಲ .. ಹಾಗಾಗಿಯೇ ವಜ್ರದಲಿ ಎರಡು ಬಣ್ಣಗಳು ಸೂರ್ಯ ಬೆಳಕು ನೀರಿನಲ್ಲಿ ಪ್ರತಿಬಿಂಬಿತವಾಗಿ ಬಿಳಿಯ ಬಣ್ಣವಾದರೆ .. ಆಳ ಸಮುದ್ರವನ್ನು ನೀಲಿ ಪ್ರತಿನಿಧಿಸುತ್ತದೆ. ಬೌದ್ದ ತಾಂತ್ರಿಕರ ಪ್ರಕಾರ 'ನೀಲಿ ಬಣ್ಣವು ಕೋಪ -ದ್ವೇಷಗಳ ಶಕ್ತಿಯನ್ನು, ಜ್ಞಾನ - ಸಿದ್ದಿಗಳಾಗಿ ಮಾರ್ಪಡಿಸುತ್ತದೆ. ಹಾಗಾಗಿಯೇ ಮಂಡಲದಲಿ ಅಕ್ಷೋಭ್ಯನು ನೀಲಿ ಬಣ್ಣದಲಿ ಪ್ರತಿನಿಧಿಸುತ್ತಾನೆ.
ಅಕ್ಷೋಭ್ಯ ಬುದ್ದನ ಸೂತ್ರ & ಧ್ಯಾನ ಕೋಪ-ದ್ವೇಷಗಳನು ಶಮನ ಮಾಡುತ್ತದೆ ಎಂಬುದು ಬೌದ್ದರ ನಂಬಿಕೆ.
*ಮಂಡಲ = ನಮ್ಮಲಿನ ಪ್ರತಿಷ್ಟಾಪನ ಕಲೆ
* 'ವಜ್ರಧಾತು'( Diamond Realm)
* ಸುಖವತಿ/ಅಭಿರತಿ (Pure Land )* ಮುಂದಿನ ದಿನಗಳಲಿ ವಿಸ್ತಾರವಾಗಿ ಹೇಳುವೆ
Pic :Philip Rodgers, Atlanta