ಭೂಮಿಗೀತ
ಬರಿಗೊರಳು ಉಲಿದ ಎದೆಹಾಡು....
Showing posts with label
ರಸಿಕ ಮಾರ್ಗ
.
Show all posts
Showing posts with label
ರಸಿಕ ಮಾರ್ಗ
.
Show all posts
Sunday, May 11, 2014
ರಸಿಕ ಮಾರ್ಗ ~5
ಅವಳ ಸೊಂಟ ಸುತ್ತಿರುವ
ಕೈಗಳಲಿ
ಪ್ರಾಚೀನ ಚೀನಾದ
ಯಾವುದೋ ಔಷಧಗುಣ
ಮಿಳಿತವಾಗಿದೆ.
ಮುಟ್ಟಿದಷ್ಟೂ ಮತ್ತೇರುತ್ತಾ
ರಾತ್ರಿಗಳು ಸ್ವರ್ಗವನ್ನೇ ನಿರಾಕರಿಸುತ್ತಿವೆ!
ರಸಿಕ ಮಾರ್ಗ: ೨೩
ವಸಂತದ ಬೆಳಗುಗಳೆಂದರೆ
ಮೈ ತುಂಬಾ ಮಿಥುನದ
ಟ್ಯಾಟುಗಳನ್ನು ಹಾಕಿಸಿಕೊಂಡಂತೆ
ಕೆಲವೊಮ್ಮೆ ಅವಳ್ಯಾರೋ
ರಂಗೋಲಿ ಎಳೆಯುವ ಮುನ್ನ
ನೀರು ಚುಮುಕಿಸಿದಂತೆ
ಒಣನೆಲಕೆ!
ರಸಿಕ ಮಾರ್ಗ ~7
ಪವಿತ್ರ ಕತ್ತಲ ಕಬಂಧ
ಬಾಹುಗಳ ತಬ್ಬಿನಲಿ
ಅಸಂಗತ ಆಕಾಶದಷ್ಟಾಗಿ
ನನ್ನ ತುಂಬಿಕೊಳ್ಳುತ್ತಿ,
ನೀನು...
ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕಿ!
ರಸಿಕ ಮಾರ್ಗ~6
ತವರ ಹಾದಿ ಎಂದೂ
ಗುಂಡಿ ಬೀಳುವುದೇ ಇಲ್ಲ
ಮತ್ತೆ ಹೊರಟಳು
ಅಂಗಿಯ ಮೇಲೆ ಅವಳ ಮಲ್ಲಿಗೆ
ಘಮಲು ಇನ್ನೂ ಹಾಗೆ ಇದೆ
ತುಟಿಯ ಕಡೆಯಲ್ಲಿ ಅಂಟಿಕೊಂಡ
ಚೂರೇ ಚೂರು ಜೇನು ಮತ್ತು
ಬಣ್ಣದ ಲಿಪ್ ಸ್ಟಿಕ್ಕು
ರಸಿಕ ಮಾರ್ಗ~5
ಆ ತುಟಿಯಲ್ಲಿ ಮೊಗೆದ
ಪಾವಳೆತೆಯ ಅಮೃತದ
ಅಮಲು
ಹುಚ್ಚಿಡಿದು ಓಡುತ್ತಿದೆ.
ನದಿಯ ಸೆರಗನು ಹಿಡಿದು..
ಮನಸಿಗೀಗ ಸಾವಿರ ಕಾಲು!
ರಸಿಕ ಮಾರ್ಗ; 4
ಹೂಗಳು ಹೊದ್ದ
ಇಹದ ಪರಿಮಳವ
ಬಯಲಗಾಳಿ ಕದ್ದ ಮೇಲೆ
ದುಂಬಿಗಳ ಕಣ್ಣು
ಹೆಣ್ಣಿನ ಮುಂಗುರುಳ ಮೇಲೆ !
ರಸಿಕ ಮಾರ್ಗ~ 3
ಅವಳ ಮುತ್ತಿನ ಪಸೆ
ಆರುವ ಮುನ್ನ
ನೇಣು ಬಿಗಿದುಕೊಳ್ಳಲಿ!
ತಡ ಬೇಡ
ಆ ಸಿಹಿಯಲ್ಲಿ ಉಸಿರ
ಜಿಗಿದಾಟ
ಲೋಕ ದಾಟಿಸಿ ಬಿಡಲಿ!!
ರಸಿಕ ಮಾರ್ಗ ~2
ಗಂಧದ ಘಮಲ ಕದ್ದು
ಕುಪ್ಪಸದೊಳಗೆ ತುಂಬಿಕೊಂಡಿದ್ದಾಳೆ
ರಾತ್ರಿಯ ನಶೆಯಲ್ಲಿ
ಗಂಧವ ಹೀರಲು
ತುಟಿಗಳು ಹೊಂಚುಹಾಕುತ್ತಿವೆ!
ರಸಿಕ ಮಾರ್ಗ ~ 1
ಡಬ್ಬಿಯಿಂದ ಜೇನ ತೆಗೆದು
ಮಗುವಿನ ಹಾಗೆ ಬೆರಳು ಚೀಪುತ್ತಾ
ಕುಳಿತಿದ್ದೆ..
ವೈಶಾಖದ ಬೇಸಗೆ ರಾತ್ರಿ.
ಇವಳು ಧಾವಿಸಿದ್ದೇ ತಿಳಿಯಲಿಲ್ಲ,
ನೀರಿಳಿದು ಗದ್ದೆ ತೆವರಿ ಕಿತ್ತಾಗಲೇ ಗೊತ್ತಾಗಿದ್ದು
ಹೆಣ್ಣು ಹೂವಲ್ಲ, ದುಂಬಿ!!
Older Posts
Home
Subscribe to:
Posts (Atom)