ನೀವು ಬರಹಗಾರರಾಗಿದ್ದು ಹೊಸ ಪುಸ್ತಕವನ್ನು ನೀವೇ ಪ್ರಕಟಿಸಬೇಕೇ ? ಇಲ್ಲಿ ಗಮನಿಸಿ :
* ಒಳ್ಳೆಯ ಬರಹಗಳನ್ನು ಆಯ್ದು ಗೆಳೆಯರಿಂದ- ಹಿರಿಯರಿಂದ ಓದಿಸಿ ಅಥವಾ ನೀವೇ ಒಂದು ಬಿಡುವಾದ ಸಮಯದಲ್ಲಿ ಓದಿ. ನಂತರ ಮತ್ತೆ ಅವುಗಳಲ್ಲಿ ಸೂಕ್ತವೆನಿಸಿದ ಒಂದಷ್ಟು ಬರಹಗಳನ್ನು ಆಯ್ದು ವರ್ಗೀಕರಣ ಮಾಡಿಕೊಳ್ಳಿ.
ಉದಾ : ಕವಿತೆ/ಕಥೆಗಳು ಆದರೆ ಒಂದಾದಮೇಲೆ ಮತ್ತೊಂದು ಯಾವ ಕವಿತೆ /ಕಥೆ ಬರಬೇಕೆಂದು ಅನಿಸಿದೆಯೋ ಹಾಗೆ.
ಇತರ ಬರಹಗಳು ಆದರೆ ನಿಮಗೆ ಸೂಕ್ತವೆನಿಸಿದ ಅನುಕ್ರಮದಲ್ಲಿ ಬರಹಗಳನ್ನು ಸಿದ್ದಪಡಿಸಿಕೊಳ್ಳಿ.
* ಡಿಜಿಟಲ್ ಪ್ರಿಂಟಿಂಗ್ ಇರುವ ಕಾರಣ ಎಲ್ಲವೂ ಈಗ ಕಂಪ್ಯೂಟರ್ ಮಯ. ಹಾಗಾಗಿ
ನಿಮ್ಮ ಬರಹಗಳನ್ನು ಬಿಡುವಾದಾಗ ಟೈಪ್ ಮಾಡಿ ಅನುಕ್ರಮವಾಗಿ ಒಂದು ಫೈಲ್ ಮಾಡಿಟ್ಟುಕೊಳ್ಳಿ. ಹೀಗೆ ಟೈಪ್ ಮಾಡುವಾಗ ನುಡಿ -ಶ್ರೀಲಿಪಿ - ಬರಹಗಳನ್ನೇ ಹೆಚ್ಚು ಬಳಸಿ ಸಾಧ್ಯವಾಗದೇ ಇದ್ದಲ್ಲಿ ಯುನಿಕೋಡ್ ನಲ್ಲೇ ( ಸಾಮಾನ್ಯವಾಗಿ ನಾವು ಬಳಸುವ ಗೂಗುಲ್ ಕನ್ನಡ ಟೈಪ್ ಮತ್ತು ಮೊಬೈಲ್ ನ ಜಸ್ಟ್ ಕನ್ನಡ ಟೈಪ್ ಗಳು ) ಟೈಪಿಸಿಕೊಳ್ಳಿ. ಆಮೇಲೆ ಅದನ್ನು ASCI ಆಗಿ ಕನ್ವರ್ಟ್ ಮಾಡಿಕೊಳ್ಳಬೇಕು.
* ನಿಮಗೆ Page Layout ಮಾಡಲು ಬಂದ್ರೆ ನಿಮಗೆ ಇಷ್ಟವಾದ ವಿನ್ಯಾಸದಲ್ಲಿ Pagemaker, Indesign ಸಾಫ್ಟ್ವೇರ್ ಗಳಲ್ಲಿ ಪುಟವಿನ್ಯಾಸ ಮಾಡಿ. ಮಧ್ಯೆ ಮಧ್ಯೆ ನಿಮಗೆ ಬೇಕಾದ ರೇಖಾಚಿತ್ರಗಳನ್ನು ಕಲಾವಿದರಿಂದ ಬರೆಸಿಕೊಂಡು ಬಳಸಿಕೊಳ್ಳಿ. ಇಂಟರ್ನೆಟ್ ಚಿತ್ರಗಳನ್ನು ಬಳಸಿಕೊಳ್ಳುವಾಗ ಕಾಪಿ ರೈಟ್ ಇದೆಯೇ ಗಮನಿಸಿ. ಇದ್ದಲ್ಲಿ ಅಂತಹ ಚಿತ್ರವನ್ನೂ ಬಳಸಬೇಡಿರಿ. ಇಲ್ಲವಾದಲ್ಲಿ ಆರಾಮಾಗಿ ಬಳಸಿ ಮತ್ತು ಚಿತ್ರದ ಮೂಲವನ್ನು ಪುಟದ ಕಡೆಯಲ್ಲೊ, ಪುಸ್ತಕದ ಕಡೆಯಲ್ಲೊ ಹೆಸರಿಸಿ. ನಿಮಗೆ ಸಾಧ್ಯವಿಲ್ಲ ಎಂದಾದರೆ DTP, ಗ್ರಾಫಿಕ್ಸ್ ಗಳು ಬೇಕಾದಷ್ಟಿವೆ. ಕನಿಷ್ಠ ಒಂದು ಪುಟಕ್ಕೆ 10 ರೂಪಾಯಿಯಂತೆ ನಿಮಗೆ ಪುಟವಿನ್ಯಾಸ ಮಾಡಿಕೊಡುತ್ತಾರೆ. ವಿನ್ಯಾಸ ಮುಗಿದ ನಂತರ Printout ತೆಗೆಸಿಕೊಂಡು ಒಮ್ಮೆ Proof ನೋಡಿಕೊಂಡು ಬಿಡಿ. ಅಕ್ಷರ, ವ್ಯಾಕರಣ ದೋಷಗಳು ಇದ್ದಲ್ಲಿ ತಿದ್ದಿಸಿ.
* ಮುನ್ನುಡಿ ಬೆನ್ನುಡಿಗಳನ್ನು ಬರೆಸುವುದಿದ್ದರೆ 1-2 ತಿಂಗಳು ಮುಂಚಿತವಾಗಿಯೇ ಬರೆಯುವವರಲ್ಲಿ ನಿಮ್ಮ ಬರಹದ ಪ್ರತಿಗಳನ್ನು ನೀಡಿರಿ.
* 1/8 ಕ್ರೌನ್ , 1/8 ಡೆಮಿ , 1/9 ಡೆಮಿ , 1/6 ಡೆಮಿ ಮುಂತಾದ ಪುಸ್ತಕದ ಗಾತ್ರಗಳಿವೆ. ನಿಮಗೆ ಬೇಕಾದ ಗಾತ್ರವನ್ನು ನಿರ್ಧರಿಸಿ ಮತ್ತು ಕೆಲವು ವಿಶೇಷ ಗಾತ್ರಗಳಿಗೆ ಕಾಗದ ಸುಮ್ಮನೆ ಕತ್ತರಿಸಿ ಹಾಳಾಗುತ್ತದೆ. ಅದನ್ನು ಅದಷ್ಟೂ ತಡೆಗಟ್ಟಿ.
* ನಿಮ್ಮ ಬರಹಗಳಿಗೆ ತಕ್ಕ ಮುಖಪುಟ ವಿನ್ಯಾಸವನ್ನು ಮಾಡಿಸಿಕೊಳ್ಳಿ. ತುಂಬಾ ಚೆನ್ನ್ಗಿ ವಿನ್ಯಾಸ ಮಾಡುವ ಕಲಾವಿದರು ನಮ್ಮಲಿ ಸಿಗುತ್ತಾರೆ. ಕನಿಷ್ಠ ರೂ.2000ಕ್ಕೆಲ್ಲಾ ಒಳ್ಳೆಯ ವಿನ್ಯಾಸ ನಿಮಗೆ ಸಿಗುತ್ತದೆ. ಅಥವಾ ನೀವೇ ಬಣ್ಣ ಕಾಗದ ಇತ್ಯಾದಿಗಳ ಕೋಲಾಜ್ ಮಾಡಿ ಸಿದ್ದಪಡಿಸಿ ಅದನ್ನು ಗ್ರಾಫಿಕ್ಸ್ ನವರಲ್ಲಿ ಕೊಟ್ಟು ನಿಮ್ಮ ಪುಸ್ತಕದ ಅಳತೆಗಿಂತ ಅರ್ಧ ಸೆಮಿ ಹೆಚ್ಚಾಗಿಯೇ PSD ಫೋಟೋಶಾಪ್ ಫೈಲ್ ಮಾಡಿಸಿಕೊಳ್ಳಿ
* ಮುಖಪುಟ-ಒಳಪುಟ ವಿನ್ಯಾಸ ಮತ್ತು ಬರಹಗಳು ಒಂದಕ್ಕೊಂದು ಪೂರಕವಾಗಿಯೇ ಇರುವಂತೆ ನೋಡಿಕೊಳ್ಳಿ. ಇಲ್ಲವಾದರೆ ಎಲ್ಲವೂ ಏನೇನೋ ಹೇಳುತ್ತಾ ಆಭಾಸವಾಗಿಬಿಡುವ ಸಾಧ್ಯತೆಗಳಿವೆ.
* ಸಿದ್ದವಾದ ಮುಖಪುಟದ PSD ಫೈಲ್ ಮತ್ತು ಬರಹಗಳ ಒಳಪುಟವಿನ್ಯಾಸವನ್ನು PDF ಫೈಲ್ ಮಾಡಿಕೊಂಡು ಬದ್ದತೆಯುಳ್ಳ ಒಳ್ಳೆ ಮುದ್ರಕರನ್ನು ಭೇಟಿಯಾಗಿ ದರವನ್ನು ಕುರಿತು ಚರ್ಚಿಸಿ.
* ಪುಸ್ತಕ ಮುದ್ರಣಕ್ಕೆ ಒಳ್ಳೆಯ ಗುಣಮಟ್ಟವನ್ನೇ ಆರಿಸಿ.
ಉದಾ: 70 GSM Maplitho ಕಾಗದ, ಮ್ಯಾಟ್ ಫಿನಿಷಿಂಗ್ ಇರುವ Multicolor ಮುಖಪುಟವನ್ನು ಮಾಡಿಸಿಕೊಳ್ಳಿ. ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ಗುಣಮಟ್ಟದ ಕಾಗದಕ್ಕೆ ಹೋಗಬಹುದು ಆದರೆ ಖರ್ಚು ಜಾಸ್ತಿಯಾಗುತ್ತದೆ.
ಕೆಳಗಿನದರದಲ್ಲಿ ಚೂರು ಹೆಚ್ಚು ಕಡಿಮೆಯಾಗಬಹುದು
70 GSM Maplitho - 4 color - 98/108 page - 1/8 ಕ್ರೌನ್ = ಕನಿಷ್ಠ ದರ ರೂ.18000
70 GSM Maplitho - 4 color - 98/108 page - 1/8 ಡೆಮಿ = ಕನಿಷ್ಠ ದರ ರೂ.25000
70 GSM Maplitho - 4 color - 98/108 page - 1/9 ಡೆಮಿ = ಕನಿಷ್ಠ ದರ ರೂ.23000
70 GSM Maplitho - 4 color - 98/108 page - 1/6 ಡೆಮಿ = ಕನಿಷ್ಠ ದರ ರೂ.30000
* ಮುದ್ರಣಕ್ಕೆ ಕೊಟ್ಟ ಮೇಲೆ ಪೂರ್ಣಹಣವನ್ನು ಮುದ್ರಕರಿಗೆ ಪಾವತಿಸಿ. ಅದು ಒಳ್ಳೆಯ ಸಂಬಂಧವನ್ನು ಉಂಟು ಮಾಡುತ್ತದೆ. ಭಾಳಷ್ಟು ಪ್ರಕಾಶಕರು ಸರಿಯಾಗಿ ಹಣ ಪಾವತಿ ಮಾಡದೇ ಹೆಸರು ಕೆಡಿಸಿಕೊಂಡಿರುವುದೇ ಹೆಚ್ಚು :( ಮಧ್ಯವರ್ತಿಗಳನ್ನು ದೂರವಿಡಿ. ನೀವೇ ನೇರವಾಗಿ ಮುದ್ರಕರೊಂದಿಗೆ ಮಾತನಾಡಿ. ನಗದು ಹಣ ಪಾವತಿ ಮಾಡುವ ಬದಲು ಬ್ಯಾಂಕ್ , ಚೆಕ್ -ಡಿಡಿ ಮುಖಾಂತರ ಪಾವತಿ ಮಾಡಿ ಮತ್ತು ನಿಮ್ಮ ಮುದ್ರಣದ ಅವಶ್ಯಕತೆಗಳ ನಮೂದಾಗಿರುವ ( ಅಂದರೆ ಕಾಗದ - ಮುಖಪುಟ - ಸೈಜ್ ಗಳ ಕುರಿತ ಸ್ಪಷ್ಟ ಉಲ್ಲೇಖವಿರುವ) sale order ಅನ್ನು ಕೇಳಿ ಪಡೆದುಕೊಳ್ಳಿ. ಮುಂದೆ ಮೋಸ ಮಾಡಿದರೆ ಕಾನೂನು ಕ್ರಮ ಜರುಗಿಸಲು ಸಹಾಯವಾಗುತ್ತದೆ. ಮತ್ತು ಒಂದು ಬದ್ದತೆಯನ್ನು ಇಬ್ಬರಲ್ಲೂ ಉಂಟು ಮಾಡುತ್ತದೆ.
* ಪುಸ್ತಕವನ್ನು ISBN ನಲ್ಲಿ ರಿಜಿಸ್ಟರ್ ಮಾಡಬೇಕಿದ್ದರೆ 1-2 ತಿಂಗಳು ಮುಂಚಿತವಾಗಿಯೇ ನಿಮ್ಮ ಪುಸ್ತಕದ ಮುಖಪುಟದ ಪ್ರತಿಯೊಂದಿಗೆ ಕಲ್ಕತ್ತಾ ದಲ್ಲಿರುವ ಅದರ ಕೇಂದ್ರ ಕಚೇರಿಗೆ ಅರ್ಜಿ ಸಲ್ಲಿಸಿ ( ಈ ಅರ್ಜಿಯೂ ಇಂಟರ್ನೆಟ್ ನಲ್ಲಿ ಲಭ್ಯ. ಅದನ್ನು ಪ್ರಿಂಟ್ ತೆಗೆದು ವಿವರ ತುಂಬಿಸಿ ಮುಖಪುಟದ ಪ್ರತಿಯ ಜೊತೆ ಅವರ ವಿಳಾಸಕ್ಕೆ ಕಳುಹಿಸಿದರೆ ಸಾಕು. ಇದಕ್ಕೆ ಯಾವ ಶುಲ್ಕವೂ ಇಲ್ಲ.
ISBN ನಂಬರು ನಿಮಗೆ ಸಿಕ್ಕ ಮೇಲೆ ಅದನ್ನು ಪುಸ್ತಕದ ಮುಖಪುಟ ಮತ್ತು ಒಳಪುಟದಲ್ಲಿ ನಮೂದಿಸಿ.
* ISBN ಕಷ್ಟವೆನಿಸಿದರೆ ಮುದ್ರಣವಾದ ನಂತರದಲೇ ಬೆಂಗಳೂರಿನಲ್ಲಿರುವ ಕೇಂದ್ರ ಗ್ರಂಥಾಲಯಕ್ಕೆ ಹೋಗಿ ಪುಸ್ತಕದ 3 ಪ್ರತಿಗಳನ್ನು ಕೊಟ್ಟು ನಿಮ್ಮ ಪುಸ್ತಕದ ಕಾಪಿ ರೈಟ್ ಅನ್ನು ಕಾಯ್ದಿಸಿರಿಕೊಳ್ಳಿ. ಇದಕ್ಕೆ ಯಾವ ಶುಲ್ಕವೂ ಇಲ್ಲ. ಉಚಿತ.
* ಗ್ರಂಥಾಲಯ ಇಲಾಖೆ ವರ್ಷಕ್ಕೆ ಎರಡು ಬಾರಿ ಆಯಾ ವರ್ಷ ಪ್ರಕಟಗೊಂಡ ಪುಸ್ತಕಗಳನ್ನು ಖರೀದಿಸಲು ಅರ್ಜಿ ಕರೆಯುತ್ತದೆ. ಬಹುಶಃ ಜೂನ್ ಮತ್ತು ಜನವರಿಯಲ್ಲಿ. ಆವಾಗ ಅರ್ಜಿಯ ಜೊತೆಯಲ್ಲಿ ನಿಮ್ಮ ಪುಸ್ತಕದ ಮೂರು ಪ್ರತಿ ಹಾಗೂ ಕಾಪಿ ರೈಟ್ ಮಾಡಿಸಿದ ಸರ್ಟಿಫಿಕೇಟ್ ನ ನೆರಳಚ್ಚು ಪ್ರತಿ ( ಜೇರಾಕ್ಸ್ ) ಜೊತೆಗೆ ಸರಿಯಾದ ಸಮಯಕ್ಕೆ ಸಲ್ಲಿಸಿ. ಆಯ್ಕೆ ಗೊಂಡಲ್ಲಿ 300 ಪ್ರತಿಗಳನ್ನು ಪರಿಣಿತರು ನಿರ್ಧರಿಸಿದ ಬೆಲೆಯಲ್ಲಿ ಕೊಂಡುಕೊಳ್ಳುತ್ತಾರೆ.
ಉದಾ : ಈ ಬೆಲೆಯು ಕಾಗದ, ಮುದ್ರಣ ಗುಣಮಟ್ಟದ ಮೇಲೆ ಅವಲಂಬಿತವಾಗಿದೆ. ಮತ್ತು ಒಂದು ಪುಟ ಇಂತಿಷ್ಟೂ ಎಂದು ನಿಗದಿ ಮಾಡಲಾಗುತ್ತದೆ. ಒಂದು ಅಂದಾಜು ಮಾಡುವುದಾದರೆ
70 GSM Maplitho - 4 color - 108 page - 1/8 ಡೆಮಿ ಪುಸ್ತಕದ ಒಂದು ಪುಟಕ್ಕೆ 0.60 ಪೈಸೆ ಅಂದುಕೊಂಡರೆ ರೂ. 64.80 ಯಂತೆ
* ನಿಮಗೆ ಬೇಕಾದ ಪುಸ್ತಕದಂಗಡಿಗಳಿಗೆ ಕೊಡಬಹುದು. ಈಗೆಲ್ಲಾ ಶೇ. 40-50 ರಷ್ಟು ರಿಯಾಯಿತಿ ಕೇಳುವುದು ಸಾಮಾನ್ಯವಾಗಿದೆ. ಉಳಿದ ಹಣವು ಪುಸ್ತಕ ಮಾರಾಟವಾದ ನಂತರವೇ ನಿಮ್ಮನು ತಲುಪುವುದು.
* ಪುಸ್ತಕಗಳನ್ನು ಕಡಿಮೆ ಬೆಲೆಯಿಟ್ಟು ನೇರ ಮಾರಾಟ ಮಾಡಿ. ( ಕಾರ್ಯಕ್ರಮಗಳಲ್ಲಿ ಸ್ಟಾಲ್ ಹಾಕುವುದು, ಆನ್ಲೈನ್ ಮೂಲಕ ಮಾರುವುದು (pay u money ಮುಂತಾದ ವೆಬ್ಸೈಟ್ ಗಳು ಮತ್ತು flipkart , amazon, snapdeal ಮಳಿಗೆಗಳು) ಓದುಗರಿಗೂ ಒಳ್ಳೆಯ ಪುಸ್ತಕ ಒಳ್ಳೆಯ ದರಕ್ಕೆ ಸಿಗುವಂತಾಗಲಿ.
ಕನ್ನಡ ಪುಸ್ತಕಗಳ ಪ್ರಕಟಣೆಗೆ ಉತ್ಸುಕರಾಗಿರುವ ಜನರಿಗೆ ನನ್ನ ಶುಭ ಹಾರೈಕೆಗಳು. ಒಳ್ಳೆಯದಾಗಲಿ. ಮಧ್ಯವರ್ತಿಗಳನ್ನು ನಂಬಿ ಮೋಸಹೋಗಬೇಡಿ. ವಿಚಾರಿಸಿ ಮುನ್ನಡೆಯಿರಿ.
- ಆರ್.ಪಿ.