Friday, August 23, 2013

ಜಯದೇವನ ಗೀತಗೋವಿಂದ

ಬಂಡು ಹೂವಿನ ಕೆಂದಳಗಳಂತೆ
ಶೋಭಿಸುವ ನಿನ್ನಧರಗಳು
ಮಹೂವದ ಹೂ ಹೊಳಪು
ಕೂಡಿಟ್ಟುಕೊಂಡ ಸ್ಪುರದ್ರೂಪಿ ಗಲ್ಲ..
ಕಣ್ಣುಗಳಲಿ ಅರಳಿನಿಂತ
ನೀಲೋತ್ಪಲಗಳ ಸೌಂದರ್ಯ
ಮೂಗು ಹೊತ್ತು ತಂದ
ಎಳ್ಳು ಹೂವಿನ ಗಾಂಭೀರ್ಯ
ಇದೋ ನಿನ್ನ ಹಲ್ಲುಗಳಲಿ
ಕಾಂತಿ ಕಾರುತ್ತಿರುವ ಕಾಡುಮಲ್ಲಿಗೆ ..
ಚೆಲುವೆ, ಹೀಗೆ ಈ ಹೂಗಳೆಲ್ಲ ನಿನ್ನ
ಮೊಗದಲಿ ಘಮಿಸುವಾಗ ಹೂಬಾಣ ತೊಟ್ಟ
ಮನ್ಮಥನು ಜಗವ ಗೆಲ್ಲುವುದರಲ್ಲಿ ಸುಳ್ಳಿಲ್ಲ. ~ ಗೀತಗೋವಿಂದ

1 comment:

  1. ನೀವಿನ್ನೂ ಗೀತಗೋವಿಂದವನ್ನು ಅನುವಾದಿಸುವ ಪ್ರಯತ್ನ ಮಾಡಿಲ್ಲವಾ ಎಂದು ಕೇಳುವವಳಿದ್ದೆ. ಇವೆರಡೂ ಕಂಡವು. ಹೀಗೆಯೆ ಮುಂದುವರೆಸಿ.

    ಪ್ರಜ್ಞಾ

    ReplyDelete