‘The only difference between the saint and the sinner is that every saint has a past, and every sinner has a future.’ – Oscar Wilde.
ನೋಡು ನನ್ನ ಗತವೂ
ನೀನೇ ಆಗಿದ್ದೆ
ಬರುವ ಭವಿಷ್ಯತ್ತೂ
ಕೂಡ
ಹೊರತು ಬಾಳುವೆ ಬಾಳದು
ಕಾಲಧರ್ಮದ ಕಟ್ಟಳೆ
ಪ್ರೀತಿ ಮುರಿಯುತ್ತಲೇ ಇದೆ.
ನಾನೊಬ್ಬ ಹಳೆಯಗೊಡ್ಡು ಪಾಪಿಸಂತ
ಸಂಬಂಧಗಳ
fashion ಕಾಲದಲ್ಲೂ ಒಲವಿನ
passionನಲ್ಲೇ ಬದುಕುತ್ತಿದ್ದೇನೆ
ಬಿಡಿಸಿಕೊಳ್ಳುತ್ತೀಯ,
ಈ ವರ್ತುಲಗಳಿಂದ
ಈ ಆವರ್ತಗಳಿಂದ
ಪೂರ್ಣ ನಿನ್ನ ಹರಿವಿನ ಸೆಳೆವಿಗೆ!
No comments:
Post a Comment