ಏನೆಲ್ಲಾ ಆದ ಮೇಲೂ
ಉಳಿದುಕೊಳ್ಳೋದು ಮೌನ,
ಒಂದು ನಿಟ್ಟುಸಿರು.
ಎದೆಯೊಳಗೆ ಅದನ್ನು ಉಳಿಸಿಕೊಳ್ಳೋ
ಜರೂರು..
ಮಾತು ಬೇಕಿದ್ದಾಗ
ಬೀಸುವ ಗಾಳಿಗೆ ತಡೆಯಲುಂಟೆ!
ಒಮ್ಮೊಮ್ಮೆ ನಕ್ಕು ಸುಮ್ಮನಾಗುವ
ನನ್ನ ಕಂಡು ಗೋಡೆಗಳಿಗೊ
ದಿಗಿಲು!
ಕಿವಿಯನ್ನೊಮ್ಮೆ ತೆರೆದರೆ
ನನ್ನದೇ ಉಸಿರಿನ ಸದ್ದು.
ಶ್ ssss....
ನೊಂದ ಹಗಲು ನಿದ್ದೆ ಹೋಗಿದೆ!
ಉಳಿದುಕೊಳ್ಳೋದು ಮೌನ,
ಒಂದು ನಿಟ್ಟುಸಿರು.
ಎದೆಯೊಳಗೆ ಅದನ್ನು ಉಳಿಸಿಕೊಳ್ಳೋ
ಜರೂರು..
ಮಾತು ಬೇಕಿದ್ದಾಗ
ಬೀಸುವ ಗಾಳಿಗೆ ತಡೆಯಲುಂಟೆ!
ಒಮ್ಮೊಮ್ಮೆ ನಕ್ಕು ಸುಮ್ಮನಾಗುವ
ನನ್ನ ಕಂಡು ಗೋಡೆಗಳಿಗೊ
ದಿಗಿಲು!
ಕಿವಿಯನ್ನೊಮ್ಮೆ ತೆರೆದರೆ
ನನ್ನದೇ ಉಸಿರಿನ ಸದ್ದು.
ಶ್ ssss....
ನೊಂದ ಹಗಲು ನಿದ್ದೆ ಹೋಗಿದೆ!
No comments:
Post a Comment